ಚಾಣಕ್ಯ ನೀತಿ – ಬೇರೆಯವರ ತಪ್ಪಿನಿಂದ ಏನು ಕಲಿಯಬಹುದು?

 

” ಬೇರೆಯವರ ತಪ್ಪಿನಿಂದ ಕಲಿತುಕೊಳ್ಳಿ, ಎಲ್ಲ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ” – ಚಾಣಕ್ಯ.

ಎಂಥ ಅನುಭವದ ಮಾತು, ಬೇರೆಯವರ ತಪ್ಪಿನಿಂದ ಕಲಿಯಿರಿ. ಪ್ರತಿಯೊಬ್ಬ ವ್ಯಕ್ತಿ ನಿಮ್ಮ ಗುರುವಿದ್ದಹಾಗೆ. ಪ್ರತಿಯೊಬ್ಬರಿಂದ ಬೇರೆ ಬೇರೆ ರೀತಿಯ ಅನುಭವದ ಪಾಠ ಕಲಿಯಬಹುದು. ವಿಶಾಲ ಮನೋಭಾವದಿಂದ ಕಲಿಯಲು ತಯಾರಾಗಿ. ಪ್ರತಿಕ್ಷಣವೂ ನಿಮಗೆ ಪಾಠಶಾಲೆ. ಬೇರೆಯವರ ತಪ್ಪುಗಳಿಂದ ಕಲಿತು ಸಮಾಜದಲ್ಲಿ ನೀವೊಬ್ಬ ಯಶಸ್ವಿ ವ್ಯಕ್ತಿಯಾಗಬಹುದು.

ನೀವು ಒಂದು ಕಾರ್ಯದಲ್ಲಿ ಯಶಸ್ವಿಯಾಗುವ ಯೂಚನೆಯಲ್ಲಿದ್ದರೆ, ಮೊದಲು ಯಾರು ಆ ರೀತಿಯ ಕಾರ್ಯದಲ್ಲಿ ಯಶ ಪಡೆದಿದ್ದಾರೋ ಅವರಿಂದ ಸಲಹೆ ಪಡೆದುಕೊಳ್ಳಿ. ಆ ವ್ಯಕ್ತಿ ಮಾತ್ರ ತನ್ನ ಅನುಭವದ ಕಥೆ ಹೇಳಬಹುದು. ಇದರಿಂದ ನಿಮ್ಮ ಸಮಯ ಉಳಿಯುವದು ಮತ್ತು ನೀವು ಸಾಧಿಸಬೇಕೆಂದಿರುವ ಕಾರ್ಯಕ್ಕೆ ದಾರಿ ದೀಪವಾಗುವದು. ಅವರ ಅನುಭವ ಮತ್ತು ಎಳುಬೀಳುಗಳು ನಿಮ್ಮ ಯಶಸ್ಸಿನ ಮೆಟ್ಟಿಲುಗಳಾಗಿ ನೀವು ಜಯಗಳಿಸಲು ಕಾರಣವಾಗುವದು.

ಅದಕ್ಕಾಗಿ ಯಾವಾಗಲೂ ಬೇರೆಯವರ ತಪ್ಪುಗಳಿಂದ ತಿಳಿದುಕೊಳ್ಳಿ.

Leave a Reply

Your email address will not be published.